News and Events

Prathibha 2019 Inauguration

Srinivas Institute of Technology’s “Prathibha 2019” was inaugurated on 31.01.2019. This two days function was inaugurated by Dr.Shrinivasa Mayya D, Principal and President of the function, Srinivas Institute of Technology, Mangalore. Speaking on the occasion he highlighted that students should grab every opportunity through these platforms. He also opined that students should recognize their own talents and outshine by participating in such competitions. Prof. Sumana V S cultural coordinator gave brief introduction about Prathibha, She also motivated students to actively participate in various events. Ms. Sonali Lokanath A. welcomed the gathering and Ms.Niriksha presented the vote of thanks. Mr.Prajnesh Shetty and Ms Delvin D’Mello was the master of ceremony of the program. After the Inaugural function all the audience took oath about “National Integrity” which was delivered by Mr. Harsha Raj, Office Superintendent, Srinivas Institute of Technology Mangalore.

Prathibha 2019 was held for two days on 31st of January and 1st of February. Students in enormous numbers participated in various competitions like dance, singing, drawing, cooking without fire, collage, Turn the coat, face painting, Tattoo art, Dum Charades, variety, Mehendi, Mad ads, Dress Designing, mime show, Rangoli, Pick and act and Pick and talk etc. Winners were awarded with exiting prizes during the valedictory function. ಪ್ರತಿಭಾ -2019 ಉದ್ಘಾಟನೆ ಸಮಾರಂಭ

ದಿನಾಂಕ 31-01-2019 ಹಾಗೂ 01-02-2019 ರಂದು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರತಿಭಾ-2019 ಇದರ ಉದ್ಘಾಟನ ಹಾಗೂ ಸಮಾರೋಪ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಎರಡು ದಿನಗಳ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀನಿವಾಸ ಮಯ್ಯ ಡಿ. ರವರು ವಹಿಸಿದ್ದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ಕಲಿಕೆಯ ಜೊತೆಗೆ ಕಲಿಕೇತರ ಚಟುವಟಿಕೆಗಳು ತುಂಬಾ ಮುಖ್ಯ ಎಂದು ಹೇಳಿದರು. ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ-2019, ಪ್ರತಿಭಾನ್ವೇಷಣೇಯ ಸದುಪಯೋಗ ಪಡೆಯಲು ಕರೆಕೊಟ್ಟರು. ಇಂತಹ ಸ್ಪರ್ಧೆಗಳು ಕೌಶಲವನ್ನು ವೃದ್ದಿಗೊಳಿಸಲು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಹೇಳಿದರು.

ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕಿಯಾದ ಪ್ರೊ. ಸುಮನ ವಿ.ಎಸ್. ಸಂಘದ ಸದಸ್ಯರ ಪರಿಚಯ ಮಾಡಿಕೊಟ್ಟರು ಹಾಗೂ ಪ್ರತಿಭಾದ ವಿವರಣೆಯನ್ನು ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಭಾಗವಹಿಸಿ, ಸಮಾರಂಭದ ಮೆರುಗಿಗೆ ಪಾತ್ರರಾದರು. ವಿದ್ಯಾರ್ಥಿನಿಯಾದ ಸೊನಾಲಿ ಲೋಕನಾಥ್. ಎ ಅತಿಥಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿನಿಯಾದ ನಿರೀಕ್ಷಾ ನೆರೆದವರನ್ನು ವಂದಿಸಿದರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಪ್ರಜ್ನೇಶ್ ಶೆಟ್ಟಿ ಹಾಗೂ ಡೆಲ್ವಿನ್ ಡಿಮೆಲ್ಲೋ ರವರು ನೆರವೇರಿಸಿದರು.

ಇದರ ಜೊತೆಗೆ “ರಾಷ್ಟ್ರೀಯ ಸೌಹಾರ್ದತೆಯ” ಕುರಿತ ಪ್ರಮಾಣ ವಚನವನ್ನು ಶ್ರೀ. ಹರ್ಷರಾಜ್, ಕಚೇರಿ ಅಧೀಕ್ಷಕರು, ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಇವರು ನಡೆಸಿಕೊಟ್ಟರು.





February 1, 2019 Posted By SIT